ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಒಡ್ಡೋಲಗ - ರಂಗಭೂಮಿಯ ಅವಿಬಾಜ್ಯ ಅಂಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಸೆಪ್ಟೆ೦ಬರ್ 15 , 2013

``ಒಡ್ಡೋಲಗ`` ಎಂಬುದು ಯಕ್ಷಗಾನ ರಂಗಭೂಮಿಯ ಒಂದು ಮಹತ್ತ್ವಪೂರ್ಣ ಅಂಗ.ಕಥಾ ಪ್ರೆವೇಶಕ್ಕೆ ಆವರಣ ಸ್ರಸ್ಟಿ ಇಲ್ಲಿಂದಲೆ.ಹಲವು ಬಗೆಯ ನ್ರತ್ಯ ವೈವಿದ್ಯವನ್ನು ಇಲ್ಲೇ ಕಾಣ ಬಹುದು.ಇಲ್ಲಿ ಮಾತಿಲ್ಲದೆ ಹೋಗ ಬಹುದು,ಆದರೆ ನ್ರತ್ಯದ ಬಾಷೆಯಿದೆ ಎಂಬುದನ್ನು ಮರೆಯಲಾಗದು.ಕನಿಷ್ಟ ಅರ್ದ ಗಂಟೆಯಾದರೂ ಈ ಭಾಗವಿರಬೇಕು.ಒಡ್ಡೋಲಗ ಸೌಂದರ್ಯಾಸ್ವಾದನೆಗೆ ಸಿದ್ದನಾಗದ ಪ್ರೇಕ್ಷಕನಿಗೆ ಈ ಬಾಗ ನೀರಸವಾದೀತು.ಹಾಗೆಂದು ಒಡ್ಡೋಲಗವಿಲ್ಲದೆ ಪ್ರಸದರ್ಶನ ನೀಡುವುದು ``ಭವ್ಯ`` ಎನಿಸದು.

ಒಡ್ಡೋಲಗಕ್ಕಾಗಿ ಒಡ್ಡೋಲಗ ಮಾಡಲಾಗದು.ಎಲ್ಲಾ ಕಥಾನಕಗಳಿಗೂ ಎಲ್ಲಾ ಸನ್ನಿವೇಷಗಳಿಗೂ ಒಂದೇ ಒಡ್ಡೋಲಗವಲ್ಲ.ಪಾತ್ರಗಳ ಶೀಲ,ಸ್ವಭಾವ,ಸಂಸ್ಕಾರಗಳಿಗೆ ಹೊಂದಿಕೊಂಡು ಒಡ್ಡೋಲಗಗಳಿವೆ.ಪಾಂಡವರ ಒಡ್ಡೋಲಗ,ರಾಮ ಲಕ್ಷಣರ ಒಡ್ಡೋಲಗ ಕಿರಾತರ ಒಡ್ಡೋಲಗ,ಹೆಣ್ಣು,ಗಂಡು ಬಣ್ಣದ ವೇಷಗಳ ರಕ್ಕಸರ ಒಡ್ಡೋಲಗ ಇವೆಲ್ಲ ಇಂದು ಹೊರಟು ಹೋಗಿವೆ.ಬೆರಳೆಣಿಕೆಯ ಭಾಗವತರು ಚಂಡೆ,ಮದ್ದಳೆಯವರು ಕಣ್ಮ್ರೆಯಾದರೆ ರಂಗಭೂಮಿಯ ಅಮೂಲ್ಯ “ಸ್ವತ್ತು” ಈ ರಂಗದಿಂದ ಕಣ್ಮ್ರರೆಯಾಗುತ್ತದೆ.ಹಿಮ್ಮೇಳದವರಸ್ಟೇ ಇದಕ್ಕೆ ಕಾರಣರಲ್ಲ,ಮುಮ್ಮೇಳದ ಕಲಾವಿದರಿಗೂ ಈ ಪ್ರಜ್ಝೆ‌ಇರುವುದಿಲ್ಲ.ಹೊಸ ಪ್ರಸಂಗಗಳಲ್ಲಿಯಂತೂ ಇದನ್ನು ಕಾಣಿಸುತ್ತಿಲ್ಲ.ಟೆಂಟಿನ ಮೇಳಗಳಲ್ಲಿ ಕಲಾವಿದರ ಕೊರತೆಯಿಂದ ಇದನ್ನು ಸಂಪೂರ್ಣ ಕೈ ಬಿಡಲಾಗಿದೆ.ಬಯಲಾಟದ ಒಂದೆರಡು ಮೇಳಗಳಲ್ಲಿ ಪೂರ್ಣಪ್ರಮಾಣದ ಒಡ್ಡೋಲಗ ಕಾಣಸಿಗುತ್ತಿದೆ.

ಕೀರ್ತಿಶೇಷ ಭಾಗವತ ನೀಲಾವರ ರಾಮಕ್ರಷ್ಣಯ್ಯನವರ “ಯಕ್ಷಗಾನ ಸ್ವಭೋದಿನಿ” ಹೊಸ ಭಾಗವತರಿಗೆ, ಕಲಾವಿದರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಬಲ್ಲುದು.ಆದರೆ ಆ ಬಗೆಗೆ ಆಸ್ಟೆ ಬೇಕು.ಪರಿಶ್ರಮ ಬೇಕು.ಒಡ್ಡೋಲಗ ಯಕ್ಷಗಾನ ವೈಭವದ “ಅನಿವಾರ್ಯ ಅಂಗ” ಎಂಬ ಪ್ರಜ್ಝೆ ಬೇಕು ಪರಂಪರೆಯ ಸತ್ವವನ್ನು ಉಳಿಸಿ ಕೊಂಡಲ್ಲದೆ ಯಾವ ಕಲೆಯೂ ಉಳಿಯಲಾರದು,ಬೆಳೆಯಲಾರದು

ಬಡಗು ತಿಟ್ಟಿನ ಒಡ್ಡೋಲಗದ ಒ೦ದು ದೃಶ್ಯ


ತೆ೦ಕು ತಿಟ್ಟಿನ ಒಡ್ಡೋಲಗದ ಒ೦ದು ದೃಶ್ಯ

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ